ಜನನ ಸ್ಥಿತಿ ಮರಣವಿರಹಿತನಾಗಿರ್ದುದೇ ಪ್ರಸಾದಕಾಯವಯ್ಯಾ.
ಅದೆಂತೆಂದೊಡೆ, ಜನನಭಾವವಳಿದು
ಪುನರ್ಜನನಭಾವ ನಿಂದುದೇ ಶುದ್ಧಶೇಷಾಂಗವು.
ಮಾಯಾಸಂಸಾರ ಸ್ಥಿತಿಭಾವವಳಿದು
ಲಿಂಗಭೋಗೋಪಭೋಗಿಯಾಗಿಹುದೇ ಸಿದ್ಧಶೇಷಾಂಗವು.
ಕಾಲ ಮರಣ ಭಾವವಳಿದು
ಮನ ನಿರಂಜನ ಮಹಾಜ್ಞಾನೈಕ್ಯವಾದುದೇ ಪ್ರಸಿದ್ಧಶೇಷಾಂಗವು.
ಈ ತ್ರಿವಿಧಾಂಗ ಸಂಗಸದ್ಭಕ್ತಿಪ್ರಿಯ
ಪಂಚಾಕ್ಷರಮೂರ್ತಿಲಿಂಗವು.