ಅಯ್ಯಾ, ಆದ್ಯರು ವೇದ್ಯರು ಸಾಧ್ಯರೆಂಬ
ಸದಮಲಾತ್ಮರುಗಳಿಗಲ್ಲದೆ
ಸಂಗಸಂಯೋಗ ಸಮರಸಸಂಪದವು
ಸಾಮಾನ್ಯವೇ ಹೇಳಾ?
ಹಂಗಿನೊಳಗಾಗಿ ಭಂಗದೊಳಗಿರ್ದು
ಭವವಿರಹಿತನೊಳು ಸಂತೃಪ್ತರೆಂಬ
ಬೆಂಗರ್ವಿಗಳ ಕಂಡು ಪೆರ್ಬಲೆಯೊಳಿಕ್ಕಿ ನಗುತಿರ್ದ
ನಮ್ಮ ಚನ್ನತ್ರಿವರ್ಣಲಿಂಗವು
ನಿರ್ಮಲಂತರ್ಮುಖಿಗಳೊಡವೆರೆದು.
Art
Manuscript
Music
Courtesy:
Transliteration
Ayyā, ādyaru vēdyaru sādhyaremba
sadamalātmarugaḷigallade
saṅgasanyōga samarasasampadavu
sāmān'yavē hēḷā?
Haṅginoḷagāgi bhaṅgadoḷagirdu
bhavavirahitanoḷu santr̥ptaremba
beṅgarvigaḷa kaṇḍu perbaleyoḷikki nagutirda
nam'ma cannatrivarṇaliṅgavu
nirmalantarmukhigaḷoḍaveredu.