Index   ವಚನ - 1242    Search  
 
ಗಂಧವನಡಗಿಸಿಕೊಂಡ ಘ್ರಾಣದಂತಾಯಿತ್ತೆನ್ನ ಭಕ್ತಿ. ರಸವನಡಗಿಸಿಕೊಂಡ ನಾಲಗೆಯಂತಾಯಿತ್ತೆನ್ನ ಭಕ್ತಿ. ರೂಪವನಡಗಿಸಿಕೊಂಡ ನೇತ್ರದಂತಾಯಿತ್ತೆನ್ನ ಭಕ್ತಿ. ಸ್ಪರ್ಶನವನಡಗಿಸಿಕೊಂಡ ತ್ವಕ್ಕಿನಂತಾಯಿತ್ತೆನ್ನ ಭಕ್ತಿ. ಶಬ್ದವನಡಗಿಸಿಕೊಂಡ ಕರ್ಣದಂತಾಯಿತ್ತೆನ್ನ ಭಕ್ತಿ. ಮತ್ತೆಲ್ಲವನಡಗಿಸಿಕೊಂಡ ಚನ್ನವೃಷಭೇಂದ್ರಲಿಂಗವು ಭಕ್ತಿಭಾವವೆಲ್ಲವು ತಾನಾಯಿತ್ತು.