Index   ವಚನ - 11    Search  
 
ಇರಿಯೆಂದಡೆ ಕೈಮುಂಚಿಯಲ್ಲದೆ ಘಾಯವಿಲ್ಲ. ಅರಿಯೆಂದಡೆ ಮನನಿಶ್ಚೈಸಲಲ್ಲದೆ ಜ್ಞಾನಿಯಲ್ಲ ಮರನ ಕಡಿವುದಕ್ಕೆ ಪ್ರವೇಷ್ಥಿಸಿದ ಮೆಳೆಯ ಕಡಿದಲ್ಲದೆ ಆಗದು. ಆಗಮದ ಯುಕ್ತಿಯಿಂದ ಬೋಧಕನಹನಲ್ಲದೆ ಅನಾಗತವನರಿಯ. ಅದ ಭೇದಿಸಬೇಕು, ಆತುರವೈರಿ ಮಾರೇಶ್ವರಾ.