Index   ವಚನ - 12    Search  
 
ಇವರೆಲ್ಲರ ಕಂಡು ನಾನವಳಿಗೆ ಹೋಗಲಾಗಿ, ಕುಳ್ಳಿರುವುದಕ್ಕೆ ಮೊದಲೆ ಒದ್ದಳೆನ್ನ ಬಾಯ ಹಲ್ಲು ಮುರಿಯಿತ್ತು. ಗಲ್ಲವೊಡೆಯಿತ್ತು ನಾಲಗೆ ಉಡುಗಿತ್ತು. ಇನ್ನಿವಳ ಗೊಡವೆ ಬೇಡ ಆತುರವೈರಿ ಮಾರೇಶ್ವರಾ.