Index   ವಚನ - 34    Search  
 
ಕೂರಲಗು ಕೊಯ್ಯಿತ್ತು ಜಾಜಿಯ ಬಿರಿಮೊಗ್ಗೆಯ, ಆರವೆ ನುಂಗಿತ್ತು ಸೇರಿದ ಪಕ್ಷಿಯ ಮಾದಿಗನ ಮನೆಯ ಮಡಕೆಯ ಕೂಳ ಹಾರುವನುಂಡ. ಸಹೋದರದವಳ ಕೂಡಿದ ಹಿರಿಯಣ್ಣ. ಅಣ್ಣನ ಹೆಂಡಿರ ತಮ್ಮ ಹಾಕಿಕೊಂಡು ಕೊಡದಿರಲಾಗಿ, ಇದು ಅನ್ಯಾಯವೆಂದು ಅವನ ಕಿರಿಯ ತಮ್ಮ ತಾ ತೆಕ್ಕೊಂಡ. ಇದು ಚೆನ್ನಾಯಿತ್ತು, ಇದರ ಗನ್ನವ ಹೇಳು, ಆತುರವೈರಿ ಮಾರೇಶ್ವರಾ.