Index   ವಚನ - 87    Search  
 
ಲಿಂಗವ ಪೂಜಿಸುವಲ್ಲಿ ಲಿಂಗದ ಅಂಗವನರಿದು ಮುಟ್ಟಬೇಕು. ಲಿಂಗಕ್ಕೆ ಅರ್ಪಿತವ ಮಾಡುವಲ್ಲಿ ಲಿಂಗದ ಆಪ್ಯಾಯನವನರಿವಲ್ಲಿ ಉಚಿತವನರಿದು ಅರ್ಪಿಸಬೇಕು. ತನ್ನ ಹಸಿವನರಿತು ಹುಸಿಯ ಪೂಜೆಯ ಕಂಡಡೆ, ಕಿಸುಕುಳದಲ್ಲಿ ಇಕ್ಕುವ, ಆತುರವೈರಿ ಮಾರೇಶ್ವರಾ.