Index   ವಚನ - 89    Search  
 
ಶರೀರದ ವಾಯುದ್ವಾರದ ಸಂಚಾರದ ನಾಡಿ ಕೂಡಿದ ಮಜ್ಜೆ ನರ ಮಾಂಸ ಪುದಿದಿಹ ಚರ್ಮದ ತ್ರಿಕೋಣೆಯ ತುದಿಯ ಉನ್ಮನಿಯಲ್ಲಿ ಅರಿಯಬೇಕೆಂಬರು. ಹರಿದು ಹೋಹಾಗ ಆತ್ಮನಡಿಯ ಹೆಜ್ಜೆಯಂತೆ ಅಡಿದೋರದ ಇರವು ಆತುರವೈರಿ ಮಾರೇಶ್ವರಾ.