Index   ವಚನ - 91    Search  
 
ಹರಿಗೋಲು ಹರಿದ ಮತ್ತೆ ಹೊಳೆಯೇನು ಮಾಡುವುದು? ಇರಿದವನಿದ್ದಂತೆ ಕೈದೇನ ಮಾಡುವುದು? ಎಚ್ಚವನಿದ್ದಂತೆ ಅಂಬಿಗೆ ಮುನಿವರೆ? ಎನ್ನ ಚಿತ್ತದಲ್ಲಿ ಕಲೆದೋರಿ, ನೀನಾಡಿಸಿದಂತೆ ಆಡಿದೆ. ನೀ ಕೊಟ್ಟ ಕಾಯಕವ ಹೊತ್ತೆ, ನೀ ಹೇಳಿದ ಬಿಟ್ಟಿಯ ಮಾಡಿದೆ ಕುಳದವನಾದ ಮತ್ತೆ ಮಾನ್ಯರ ಒಲವರ ಎನಗೊಂದು ಗುಣವಿಲ್ಲ. ನೀನಾಡಿಸಿದಂತೆ ಆಡಿದೆ, ಆತುರವೈರಿ ಮಾರೇಶ್ವರಾ.