Index   ವಚನ - 4    Search  
 
ಆತ್ಮಂಗೆ ಬಂಧ ಮೋಕ್ಷಂಗಳಾವ ತೆರದಿದಂದಲಾಹವೆಂದಡೆ: ಆಕಾಶಾದಿ ಭೂತಂಗಳೈದು, ಪ್ರಾಣಾದಿ ವಾಯುಗಳೈದು, ಶ್ರೋತ್ರಾದಿ ಇಂದ್ರಿಯಂಗಳೈದು ಶಬ್ದಾದಿ ವಿಷಯಂಗಳೈದು ಮನಸಾದಿ ಕರಣ ನಾಲ್ಕು ಇಂತಿವೆಲ್ಲವೂ ಕೂಡಿ ಸ್ಥೂಲತನುವಾಯಿತ್ತು. ಅದೆಂತೆಂದಡೆ: ಭೌತಿಪಂಚಭಿಃ ಪ್ರಾಣೈಃ ಚತುರ್ದಶಭಿರಿಂದ್ರಿಯ್ಯೆಃ | ಚತುರ್ವಿಂಶತಿ ದೇಹಾನಿ ಸಾಂಖ್ಯಶಾಸ್ತ್ರೋ ವಿದೋ ವಿಧುಃ || ಎಂದುದಾಗಿ, ಇಂತೀ ಇಪ್ಪತ್ತುನಾಲ್ಕು ತತ್ವದಿಂದಾದುದು ದೇಹವು ತಾನೆಂಬುದೇ ಅವಿದ್ಯೆ, ಅವಿದ್ಯೆಯೇ ಅಹಂಕಾರ, ಅಹಂಕಾರವೇ ಬಂಧ ಅದು ಕಾರಣ ದೇಹವು ಆತ್ಮನಲ್ಲ. ದೇಹವ ವ್ಯತಿರಿಕ್ತವಾಗಿ ಅರಿವುತಿಪ್ಪ ನಾಸ್ತಿಕನೇ ಆತ್ಮ, ಅದೆಂತೆಂದಡೆ: ಘಟದ್ರಷ್ಟಾ ಘಟದ್ವಿನ್ನಃ ಸರ್ವಥಾನ ಘಟೋಯಥಾ | ದೇಹದ್ರಷ್ಟಾ ತಥಾದೇಹೋ ನಾಹಮಿತ್ಯವಧಾರಯಃ || ಎಂದುದಾಗಿ, ದೇಹವಾತ್ಮನಲ್ಲೆಂಬುದೆ ಅವಿದ್ಯನಾಶ. ಅವಿದ್ಯನಾಶವೆ ಹಮ್ಮಿನ ಲಯ, ಹಮ್ಮಿನ ಲಯದೆ ಮೋಕ್ಷ. ಅದೆಂತೆಂದಡೆ: ಅನಾತ್ಮ ಭೂತದೇಹಾದೌ ಆತ್ಮಬುದ್ದಿಸ್ತುದೇಹಿನಾಂ | ಸಾವಿದ್ಯಾ ತತ್ಕೃತೊ ಬಂಧಸ್ತನ್ನಾಶೋ ಮೋಕ್ಷಂ ಉಚ್ಯತೇ|| ನಿದ್ರಾದೌ ಜಾಗರಸ್ಯಾಂತಯೋಭಾವ ಉಪಚಾಯತೇ| ತಂ ಭಾವಂ ಭಾವಯೇದ್ರಾವ ಮುಕ್ತಿರೇವ ನ ಸಂಶಯಃ || ಅನಾಖ್ಯೇತು ನಿರಾಲಂಬೇ ಚೌಗ್ರಾಹೇಮ ನ ವರ್ಜಿತೇ || ನಿಸ್ತತ್ವೇ ಯೋಜಿತೋ ಮುಕ್ತಃ ಇತಿ ಶಾಸ್ತ್ರೇಷು ನಿಶ್ಚಯಃ || ಎಂದುದಾಗಿ, ಬಂಧವ ಹರಿದು ಮುಕ್ತರಾಗಿಪ್ಪ ನಿಜಶರಣರ ಘನವ ನೀವೇ ಬಲ್ಲಿರಿ ಪರಕಮಗುರುವೆ ನಂಜುಂಡಶಿವಾ.