ಎನ್ನ ತನುವ ತನ್ನ ತನುವಿನಿಂದ ಅಪ್ಪಿದನವ್ವಾ.
ಎನ್ನ ಮನವ ತನ್ನ ಮನದಿಂದ ಆಲಿಂಗಿಸಿದವನವ್ವಾ.
ಎನ್ನ ಅರಿವ ತನ್ನ ಅರಿವಿನಿಂದ ಅವಗವಿಸಿದನವ್ವಾ.
ಇಂತಾದ ಬಳಿಕ ಎನ್ನ ವಿಷಯವೆಲ್ಲವೂ ತನ್ನ ನಿಮಿತ್ಯ,
ತನ್ನ ವಿಷಯವೆಲ್ಲ ನನ್ನ ನಿಮಿತ್ಯವಾಗಿ,
ಆನಳಿದು ತಾನುಳಿದು, ತಾನುಳಿದು ಆನುಳಿದು,
ತಾನು ತಾನಾದ ನಿಜಸುಖದ ಸುಗ್ಗಿಯನೇನೆಂಬೆ,
ಪರಮಗುರುವೆ ನಂಜುಂಡಶಿವಾ!