Index   ವಚನ - 10    Search  
 
ಬಸವನೆ ಮಖ ಸೆಜ್ಜೆ, ಬಸವನೆ ಅಮಳೋಕ್ಯ. ಬಸವನ ನಾನೆತ್ತಿ ಮುದ್ದಾಡಿಸುವೆನು. ಬಸವಾ, ಸಂಗನಬಸವದೇವಾ ಜಯತು. ಬಸವಾ, ಸಂಗನಬಸವಲಿಂಗಾ ಜಯತು. ಬಸವಗೂ ಎನಗೂ ಭಾವ ಭೇದವಿಲ್ಲ; ಬಸವಗೂ ಎನಗೂ ರಾಶಿಕೂಟವುಂಟು. ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ಬಸವನ ಬೆಸಲಾದ ಬಾಣತಿ ನಾನಯ್ಯಾ ಬಸವಾ, ಬಸವಾ, ಬಸವಾ.