ಭಕ್ತಿಯ ತವನಿಧಿಯೆ, ಮುಕ್ತಿಯ ಮೂರುತಿಯೆ,
ಲಿಂಗಜಂಗಮದ ಚೈತನ್ಯವೆ
ನಿಮ್ಮನಗಲಿ ಎಂತು ಸೈರಿಸುವೆನು?
ಎಲೆ ಅಯ್ಯಾ ಪರಮಗುರುವೆ,
ಆಹಾ ಎನ್ನ ಅಂತರಂಗದ ಜ್ಯೋತಿಯೆ,
ನಿಮ್ಮ ಒಕ್ಕ ಶೇಷ ಪ್ರಸಾದವನಿಕ್ಕಿ
ಎನ್ನ ಪಾವನವ ಮಾಡಿ ಉಳುಹಿದೆಯಯ್ಯಾ.
ಲಿಂಗವೆ ಎನಗಿನ್ನಾರು ಹೇಳಯ್ಯಾ ನೀವಲ್ಲದೆ?
ಬಸವಣ್ಣಪ್ರಿಯ ಚೆನ್ನಸಂಗಯ್ಯಾ,
ನೀವಗಲಿದಡೆ ಎನ್ನ ಪ್ರಾಣ
ನಿಮ್ಮೊಳಗಲ್ಲದೆ ಅಗಲಬಲ್ಲುದೆ ?
Art
Manuscript
Music
Courtesy:
Transliteration
Bhaktiya tavanidhiye, muktiya mūrutiye,
liṅgajaṅgamada caitan'yave
nim'managali entu sairisuvenu?
Ele ayyā paramaguruve,
āhā enna antaraṅgada jyōtiye,
nim'ma okka śēṣa prasādavanikki
enna pāvanava māḍi uḷuhideyayyā.
Liṅgave enaginnāru hēḷayyā nīvallade?
Basavaṇṇapriya cennasaṅgayyā,
nīvagalidaḍe enna prāṇa
nim'moḷagallade agalaballude?