ಅಯ್ಯ! ಶ್ರೀಗುರುಲಿಂಗಜಂಗಮದ
ವೇಧಾಮಂತ್ರಕ್ರಿಯಾದೀಕ್ಷೆಗೆ ಹೊರಗಾದ
ಭುವನದ ಶೈವದೈವದಾರ್ಚನೆ ಪೂಜೆಯ ಮಾಡಿ,
ಅದರುಚ್ಛಿಷ್ಟವ ಭುಂಜಿಸುವದಂಗಾಚಾರ.
ಅದನುಳಿದು ಶುದ್ಧಸಿದ್ಧಪ್ರಸಿದ್ಧಪ್ರಸಾದಸ್ವರೂಪವಾದ
ಅನಾದಿಗುರುಲಿಂಗಜಂಗಮದ ಅರ್ಚನೆ ಪೂಜೆಯ ಮಾಡಿ
ಕಿಂಕರ್ವಾಣದಿಂದ ಅವರ ಒಕ್ಕುಮಿಕ್ಕ
ಪ್ರಸಾದವ ಹಾರೈಸುವುದೆ ಲಿಂಗಾಚಾರ.
ಈ ಭೇದವ ತಿಳಿದು ಪಂಚಾಚಾರ ಆಚರಣೆಗೆ ತಂದು,
ಸಪ್ತಾಚಾರವ ಸಂಬಂಧವಿಟ್ಟು,
ಅಷ್ಟಾವರಣದ ಕಲೆನೆಲೆಗಳ ಒಳಗು-ಹೊರಗು ಎನ್ನದೆ,
ಸದ್ಗುರುಮುಖದಿಂದ ಆಚರಣೆ-ಸಂಬಂಧವ ತಿಳಿದು,
ಸದ್ಭಕ್ತಿ-ಸಮ್ಯಜ್ಞಾನ-ವೈರಾಗ್ಯ-ಷಟ್ಸ್ಥಲಮಾರ್ಗವ ಹಿಡಿದು,
ನಿಜಾಚರಣೆಯಲ್ಲಿ ಆಚರಿಸುವರೆ ಶಿವಶಕ್ತಿ,
ಶಿವಭಕ್ತ, ಶಿವಜಂಗಮವಲ್ಲದೆ,
ಉಳಿದ ವೇಷಧಾರಿಗಳೆಲ್ಲ
ಎನ್ನೊಡೆಯ ಪ್ರಮಥಗಣಾಚಾರಕ್ಕೆ
ಹೊರಗೆಂದಾತನಂಬಿಗರ ಚೌಡಯ್ಯನು.
Art
Manuscript
Music
Courtesy:
Transliteration
Ayya! Śrīguruliṅgajaṅgamada
vēdhāmantrakriyādīkṣege horagāda
bhuvanada śaivadaivadārcane pūjeya māḍi,
adarucchiṣṭava bhun̄jisuvadaṅgācāra.
Adanuḷidu śud'dhasid'dhaprasid'dhaprasādasvarūpavāda
anādiguruliṅgajaṅgamada arcane pūjeya māḍi
kiṅkarvāṇadinda avara okkumikka
prasādava hāraisuvude liṅgācāra.
Ī bhēdava tiḷidu pan̄cācāra ācaraṇege tandu,
saptācārava sambandhaviṭṭu,Aṣṭāvaraṇada kalenelegaḷa oḷagu-horagu ennade,
sadgurumukhadinda ācaraṇe-sambandhava tiḷidu,
sadbhakti-samyajñāna-vairāgya-ṣaṭsthalamārgava hiḍidu,
nijācaraṇeyalli ācarisuvare śivaśakti,
śivabhakta, śivajaṅgamavallade,
uḷida vēṣadhārigaḷella
ennoḍeya pramathagaṇācārakke
horagendātanambigara cauḍayyanu.