Index   ವಚನ - 28    Search  
 
ಅರಿವನರಿದಲ್ಲಿ ತಾನೆನ್ನದೆ ಇದಿರೆನ್ನದೆ, ಮತ್ತೇನುವ ಉಳಿದುವ ಸಂಪಾದಿಸದೆ, ಅರುಣನ ಕಿರಣದಲ್ಲಿ ಅರತ ಸಾರದಂತೆ, ಕಾದ ಹಂಚಿನಲ್ಲಿ ನೀರ ಬಿಟ್ಟಂತೆ, ಬಧಿರನ ಕಾವ್ಯದಂತೆ, ಚದುರನ ಒಳುಪಿನಂತೆ ತಲೆದೋರದೆ ನಿಂದಾತನ ಅಡಿಗೆರಗುವೆನೆಂದನಂಬಿಗರ ಚೌಡಯ್ಯ.