Index   ವಚನ - 30    Search  
 
ಅರಿವುದೊಂದು ವಾಯು, ಮರೆವುದೊಂದು ವಾಯು. ಉಭಯದಿಂ ತೋರುವ ವಾಯು ಒಂದೆಯಾಗಿ, ವಾಳುಕದ ಒಳ ಹೊರಗಿನ ನೀರಿನಂತೆ ವೆಗ್ಗಳಿಸಿದಡೆ ನಿಂದು ತೆಗೆದಡೆ ಅಲ್ಲಿಯ ಅಡಗುವಂತೆ, ಅರಿದು ನುಡಿದು ನಡೆದಡೆ ಜ್ಞಾನಿ, ನುಡಿದ ನುಡಿಗೆ ನಡೆಯಡಗೆ ಆತನೆ ಜೀವಭಾವಿ ಎಂದನಂಬಿಗರಚೌಡಯ್ಯ.