Index   ವಚನ - 54    Search  
 
ಉಂಡರೆ ಭೂತನೆಂಬರು, ಉಣದಿದ್ದರೆ [ಚಾತಕ]ನೆಂಬರು. ಭೋಗಿಸಿದರೆ ಕಾಮಿಯೆಂಬರು, ಭೋಗಿಸದಿದ್ದರೆ ಮುನ್ನ ಮಾಡಿದ ಕರ್ಮಿ ಎಂಬರು. ಊರೊಳಗಿದ್ದರೆ ಸಂಸಾರಿ ಎಂಬರು, ಅಡವಿಯೊಳಗಿದ್ದರೆ ಮೃಗಜಾತಿ ಎಂಬರು. ನಿದ್ರೆಗೈದರೆ ಜಡದೇಹಿ ಎಂಬರು, ಎದ್ದಿದ್ದರೆ ಚಕೋರನೆಂಬರು. ಇಂತೀ ಜನಮೆಚ್ಚಿ ನಡೆದವರ ಎಡದ ಪಾದ ಕಿರಿ ಕಿರುಗುಣಿಯಲ್ಲಿ ಮನೆ ಮಾಡು, ಎಂದಾತ ನಮ್ಮ ಅಂಬಿಗರ ಚೌಡಯ್ಯ.