Index   ವಚನ - 56    Search  
 
ಉಪ್ಪಿಲ್ಲದ ಮೇಲೋಗರ ತುಪ್ಪದಲ್ಲಿ ಬೆಂದಡೆ, ತುಪ್ಪ ಲೇಸೆಂದಡೆ ಸಪ್ಪೆಯಾಗಿ ತೋರಿತ್ತು. ಅರಿವು ಶುದ್ಧವುಳ್ಳವನೆಂದಡೆ, ಕುರುಹಿನ ಬೆಂಬಳಿಯಲ್ಲಿ ಅಡಗಿದಡೆ ಅರಿವಿಗೆ ದೂರವೆ? ಅರಿವು ಕುರುಹು ನಿಃಪತಿಯಹನ್ನಕ್ಕ ಆರನೂ ಕೆಡೆನುಡಿಯಬೇಡೆಂದನಂಬಿಗರ ಚೌಡಯ್ಯ.