Index   ವಚನ - 69    Search  
 
ಒಂದನರಿದು ಒಂದ ಮರೆದೆಹೆನೆಂಬ ಸಂದೇಹದವನಲ್ಲ. ಸರ್ವರ ಕೂಡಿಕೊಂಡು ಅರಿದೆಹೆನೆಂಬ ಬಂಧಮೋಕ್ಷದವನಲ್ಲ. ಆಗಿಗೆ ಮುಯ್ಯಾಂತು, ಚೇಗೆಗೆ ಮನಗುಂದುವನಲ್ಲ. ಸುಖದುಃಖವೆಂಬ ಉಭಯವ ಸರಿಗಾಬವ[ನ]ಲ್ಲ. ನಿಂದ ನಿಜವೆ ತಾನಾಗಿದ್ದವಂಗೆ ಬೇರೆ ಬಂಧವೊಂದೂಯಿಲ್ಲ, ಎಂಬನಬಿಂಗರ ಚೌಡಯ್ಯ