Index   ವಚನ - 76    Search  
 
ಕಂಗಳ ನಾಮ ಹರುಗುಲವಾಗಿ, ನೋಡುವ ದೃಷ್ಟಿ ಅಂಬಿಗನಾಗಿ, ಕರಣೇಂದ್ರಿಯವೆಂಬ ಬಹುಜನಂಗಳ ಕೂಡಿ, ಆಸೆಯೆಂಬ ಹೊಳೆಯ ದಾಟುವುದಕ್ಕೆ ಹುಟ್ಟ ಕಾಣದೆ ಹರುಗುಲು ಈಚೆ ಉಳಿಯಿತ್ತೆಂದನಂಬಿಗರ ಚೌಡಯ್ಯ.