Index   ವಚನ - 94    Search  
 
ಕಾಮವ ಕಳೆದು, ಕ್ರೋಧವ ದಾಂಟಿ, ಲೋಭವ ಹಿಂಗಿ, ಮೋಹಾದಿಗಳಲ್ಲಿ ಮನವಿಕ್ಕದೆ, ಆ ಕಾಮವ ಲಿಂಗದಲ್ಲಿ ಮರೆದು, ಕ್ರೋಧವ ಕರಣಂಗಳಲ್ಲಿ ಬೈಚಿಟ್ಟು, ಲೋಭವ ಸರ್ವೇಂದ್ರಿಯಂಗಳಲ್ಲಿ ಸಂಬಂಧಿಸಿ, ಮೋಹಾದಿ ಗುಣಂಗಳ ಸ್ವಯಚರಪರದಲ್ಲಿ ಗರ್ಭೀಕರಿಸಿ, ನಿಜವಾಸಿಯಾಗಿ ನಿಂದಾತನ ಅಡಿಗೆರಗುವೆನೆಂದನಂಬಿಗರ ಚೌಡಯ್ಯ.