Index   ವಚನ - 102    Search  
 
ಕಾಳಗದಲ್ಲಿ ಹೋಗದಿರಯ್ಯ, ಕೋಲು ಬಂದು ನಿಮ್ಮ ತಾಗುಗು. ಆರು ದರುಶನಕ್ಕೆ ತೋರದಿರಿ, ಸೂರೆಗೊಂಡಹವು ನಿಮ್ಮುವ. ನಾಲ್ಕು ವೇದ ಹದಿನಾರು ಶಾಸ್ತ್ರವೆಂಬರ ಬೆನ್ನುಹತ್ತದಿರು, ಬೇರೆ ತೀರ್ಥ ಜಾತ್ರೆಯೆಂಬವರ ಕೊಂ[ಡು] ಅರಡಿತನ ಬೇಡ, ಪುಣ್ಯಪಾಪವೆಂಬೆರಡು ಭಂಡವ ಬೆನ್ನಿಲಿಕ್ಕಿಕೊಂಡು ಬಾರದಿರು. ನಿನ್ನಾತ್ಮನ ನೀ ತಿಳಿ, ಜಗ ನಿನ್ನೊಳಗೆಂದನಂಬಿಗರ ಚೌಡಯ್ಯ.