Index   ವಚನ - 110    Search  
 
ಕೂರ್ಮನ ಭಾವ ನಿಂದಲ್ಲಿ, ಮೋಹವಾಗಿಪ್ಪುದು. ಮರ್ಕಟಭಾವ ನಿಂದಲ್ಲಿ, ಹೆಚ್ಚುಗೆ ತಗ್ಗನರಸುತ್ತಿಪ್ಪುದು. ವಿಹಂಗಜ್ಞಾನ ನಿಂದಲ್ಲಿ, ಅಡಿ ಆಕಾಶ ಉಭಯವನರಸುತ್ತಿಪ್ಪುದು. ಪಿಪೀಲಿಕಭಾವ ನಿಂದಲ್ಲಿ, ಮೂರ್ತಿಧ್ಯಾನವಾಗಿಪ್ಪುದು. ಧ್ಯಾನ ನಿಷ್ಪತ್ತಿಯಾಗಬೇಕೆಂದನಂಬಿಗರ ಚೌಡಯ್ಯ.