ಕೈ ಮುಟ್ಟುವಲ್ಲಿ, ಕಿವಿ ಕೇಳುವಲ್ಲಿ, ಬಾಯಿ ಕೊಂಬಲ್ಲಿ,
ಮೂಗು ವಾಸಿಸುವಲ್ಲಿ, ಕಣ್ಣು ನೋಡುವಲ್ಲಿ-
ಇಂತೀ ಐಯಿದರ ಗುಣ ಎಡೆಯಾಟ
ಅದಾರಿಂದ ಎಂಬುದ ತಾ ವಿಚಾರಿಸಿದಲ್ಲಿ,
ಪಂಚಕ್ರೀಯಲ್ಲಿ ಸಂಚಿತ ಪ್ರಾರಬ್ಧ ಆಗಾಮಿಯೆಂಬ
ಹಿಂಚುಮುಂಚಿಗೆ ಸಿಕ್ಕದೆ, ಕುಡಿವೆಳಗಿನ ಮಿಂಚಿನ
ಸಂಚದಂತಿರಬೇಕೆಂದನಂಬಿಗರ ಚೌಡಯ್ಯ.
Art
Manuscript
Music
Courtesy:
Transliteration
Kai muṭṭuvalli, kivi kēḷuvalli, bāyi komballi,
mūgu vāsisuvalli, kaṇṇu nōḍuvalli-
intī aiyidara guṇa eḍeyāṭa
adārinda embuda tā vicārisidalli,
pan̄cakrīyalli san̄cita prārabdha āgāmiyemba
hin̄cumun̄cige sikkade, kuḍiveḷagina min̄cina
san̄cadantirabēkendanambigara cauḍayya.