ತಾನು ಮಾಡುವ ಭಕ್ತಿ,
ಲಿಂಗದ ಉಪದೇಶವನರಿಯದ ಕಾರಣ
ಕಂಡ ಕಂಡ ದೈವಕ್ಕೆ ಹೋಗಿ,
ಮಂಡೆ ಮುಂದಲೆಯ ಕೊಟ್ಟನಾದಡೆ ಆತ ಭಕ್ತನಲ್ಲ,
ಆತನ ಸಂಗಡ ಹೋಗಿ ಉಪದೇಶವ ಮಾಡಿದಾತನು ಗುರುವಲ್ಲ,
ಅಂಥವರ ಮನೆಯಲ್ಲಿ ಹೊಕ್ಕು ಉಂಬಾತ ಜಂಗಮವಲ್ಲ.
ಈ ಭಕ್ತ ಜಂಗಮದ ಭೇದವೆಂತೆಂ[ದ]ಡೆ:
ಒಡಲ ಕಿಚ್ಚಿಗೆ ಹೋಗಿ ತುಡುಗುಣಿನಾಯಿ ಹೊಕ್ಕು,
ತನ್ನ ಒಡಲ ಹೊರೆದಂತಾಯಿತಯ್ಯ [ಎಂದು]
ಪೊಡವಿಯೊಳಗೆ ಡಂಗುರವನಿಕ್ಕಿ ಸಾರಿದಾತ
ನಮ್ಮ ಅಂಬಿಗರ ಚೌಡಯ್ಯ.