Index   ವಚನ - 159    Search  
 
ನಾದ ಬಿಂದುವಿನಲ್ಲಿ ಸಾಧಿಸಿದ ಹದಿನಾರು [ದಳ] ಕಳೆಯ ಸುಳಿಯೊಳಗೆತಾವರೆಯ ಪದ್ಮದ ಜ್ಞಾನಮೇಲುದ ಹಾಸಿ, ದೇವನಾತ್ಮನಲ್ಲಿ ಕುಳ್ಳಿರ್ದ ಭಾವ ಮುಂದಟ್ಟಿ, ಕಾಯವ ನಿಲಿಸಿ ದೇವನೋಲಗದೊಳಗಿರ್ದನಂಬಿಗ ಚೌಡಯ್ಯ.