ಪರಪುರುಷಾರ್ಥವನರಿಯದೆ
ಕೆಟ್ಟ ನರಗುರಿಗಳು ನೀವು ಕೇಳಿರೋ:
ಪರಪುರುಷಾರ್ಥಕ್ಕೆ ಪ್ರಾಣವ ಕೊಟ್ಟವರುಂಟು.
ಮರಳಿ ಕೊಟ್ಟದ್ದಕ್ಕೆ ಕೀರ್ತಿದೇಹವ ಪಡೆದವರ
ಪರಿಯ ಕೇಳು ಎಲೇ ಮನವೇ:
ಪರಪುರುಷಾರ್ಥಿಯಾದರೆ, ವೀರವಿಕ್ರಮನಂತಾಗಬೇಕು,
ಪರಪುರುಷಾರ್ಥಿಯಾದರೆ, ಬಸವಕುಮಾರನಂತಾಗಬೇಕು,
ಪರಪುರುಷಾರ್ಥಿಯಾದರೆ, ಕಪೋತಪಕ್ಷಿಯಂತಾಗಬೇಕು,
ಇಂತೀ ಪರಪುರುಷಾರ್ಥಕ್ಕೆ ಪ್ರಾಣವ ಕೊಟ್ಟವರುಂಟು.
ಹಣವೇನು ದೊಡ್ಡಿತ್ತು? ಹೆಣ್ಣೇನು ದೊಡ್ಡಿತ್ತು?
ಮಣ್ಣೇನು ದೊಡ್ಡಿತ್ತು? ಅನ್ನವೇನು ದೊಡ್ಡಿತ್ತು?
ಇಂತಿವುಗಳೊಳು ಒಂದನಾದರೂ
ಪರಪುರುಷಾರ್ಥಕ್ಕೆ ನೀಡದೆ ಮಾಡದೆ,
ತನ್ನ ಶರೀರವ ಹೊರೆದುಕೊಂಡು ಬದುಕುವೆನೆಂಬ
ಹೊಲೆ ಮಾದಿಗರುಗಳಿಗೆ ಇಹ-ಪರ ನಾಸ್ತಿ
ಎಂದಾತ ನಮ್ಮ ಅಂಬಿಗರ ಚೌಡಯ್ಯ.
Art
Manuscript
Music
Courtesy:
Transliteration
Parapuruṣārthavanariyade
keṭṭa naragurigaḷu nīvu kēḷirō:
Parapuruṣārthakke prāṇava koṭṭavaruṇṭu.
Maraḷi koṭṭaddakke kīrtidēhava paḍedavara
pariya kēḷu elē manavē:
Parapuruṣārthiyādare, vīravikramanantāgabēku,
parapuruṣārthiyādare, basavakumāranantāgabēku,
parapuruṣārthiyādare, kapōtapakṣiyantāgabēku,
intī parapuruṣārthakke prāṇava koṭṭavaruṇṭu.
Haṇavēnu doḍḍittu? Heṇṇēnu doḍḍittu?
Maṇṇēnu doḍḍittu? Annavēnu doḍḍittu?
Intivugaḷoḷu ondanādarū
Parapuruṣārthakke nīḍade māḍade,
tanna śarīrava horedukoṇḍu badukuvenemba
hole mādigarugaḷige iha-para nāsti
endāta nam'ma ambigara cauḍayya.