Index   ವಚನ - 231    Search  
 
ಲಿಂಗವೆಂಬುದು ಕಾಯದ ತೊಡಕು, ಗುರುವೆಂಬುದು ಭಾವದ ತೊಡಕು, ಜಂಗಮವೆಂಬುದು ಮೂರರ ತೊಡಕು, ಜ್ಞಾನಮಯವೆಂಬುದು ಸರ್ವಮಯವೆಲ್ಲರ ತೊಡಕು. ಒಂದ ಮೆಟ್ಟಿ, ಒಂದ ಕಂಡು, ಒಂದಕ್ಕೆ ಸಂದೇಹವಿಲ್ಲದೆ ನಿಂದುದು. ಹಿಂದಳ ಮುಂದಳ ದುಂದುಗವಿಲ್ಲ ಎಂದನಂಬಿಗರ ಚೌಡಯ್ಯ.