Index   ವಚನ - 232    Search  
 
ಲಿಂಗವೆಲ್ಲಿರದು, ವೇಶಿಯ ಭುಜದಲ್ಲಿರದೆ ? ಲಿಂಗವೆಲ್ಲಿರದು, ಪಶುವಿನ ತೊಡೆಯಲ್ಲಿರದೆ? ಲಿಂಗವೆಲ್ಲಿರದು, ಸೀಮೆಯ ಕಲ್ಲಿನಲ್ಲಿರದೆ? ಲಿಂಗವೆಲ್ಲಿರದು ತರುವಿನ ಬುಡದಲ್ಲಿರದೆ? ಲಿಂಗವಿದ್ದಲ್ಲಿ ಫಲವೇನು? ಆಚಾರವಿಲ್ಲದನ್ನಕ್ಕ. ಆಚಾರವಿದ್ದು ಫಲವೇನು? ಲಿಂಗವಿಲ್ಲದನ್ನಕ್ಕ. ಅಂಗದ ಮೇಲೆ ಲಿಂಗವುಳ್ಳವರ ಭಕ್ತರೆಂಬವರ ಬಾಯಲ್ಲಿ ಹೇಲಡಿಯ ಹುಡಿಯ ಹಾಕದೆ ಮಾಣ್ಪನೆ ಎಂದನಂಬಿಗರ ಚೌಡಯ್ಯ.