Index   ವಚನ - 241    Search  
 
ವೇದವ ಪಠಸುವಲ್ಲಿ, ಶಾಸ್ತ್ರವನೋದುವಲ್ಲಿ, ಆಗಮಂಗಳ ತಿಳಿವಲ್ಲಿ, ಶಿವಜ್ಞಾನ ಅನುಭಾವವ ಮಾಡುವಲ್ಲಿ, ಪಗುಡಿ ಪರಿಹಾಸಕರ ಅರ್ತಿಕಾರರ ಹೊತ್ತುಹೋಕರಿಗಾಗಿ ಸಂಘಟ್ಟುವರ ಕೂಡಲುಂಟೆ? ಇಂತಿವರಲ್ಲಿ ಚಚ್ಚಗೊಟ್ಟಿಯ ಮಾಡುವ ಮಿಟ್ಟೆಯ ಭಂಡರನೊಪ್ಪನೆಂದನಂಬಿಗರ ಚೌಡಯ್ಯ.