Index   ವಚನ - 242    Search  
 
ವೇದವೇದಾಂತರ, ಶಾಸ್ತ್ರಸಂಪದರ, ಆಗಮಕ್ಕತೀತರ, ಪರಬ್ರಹ್ಮಸ್ವರೂಪರ, ಪರಮವಿರಕ್ತರ ಕೂಡಿಕೊಂಡು ತಾನರಿವಲ್ಲಿ, ಅರಿವ ಕೇಳುವಲ್ಲಿ ಎಡೆದೆರಪಿಲ್ಲದೆ, ಪದಪದಾರ್ಥಂಗಳಲ್ಲಿ, ಕ್ರೀಕ್ರಿಯಾರ್ಥದಿಂದ ತತ್ವತತ್ವಾರ್ಥಂಗಳಲ್ಲಿ ಪದಚ್ಛೇದವ ಮಾಡುವ ಪರಮಾರ್ಥಿಕರ ಪಾದವ ಪದವೆಂದನಂಬಿಗರ ಚೌಡಯ್ಯ.