Index   ವಚನ - 263    Search  
 
ಸ್ಥಲಂಗಳ ನೋಡಿ ಕಂಡೆಹೆನೆಂದಡೆ, ಅಡಗಿದ ಮಡಕೆಯಲ್ಲ ಆಚಾರದಲ್ಲಿ ನೋಡಿ ಕಂಡೆಹೆನೆಂದಡೆ, ಸಂಕಲ್ಪದೇಹಿಯಲ್ಲ. ಸಕಲ ಆಗಮಂಗಳಲ್ಲಿ ನೋಡಿ ಕಂಡೆಹೆನೆಂದಡೆ, ಮಾತಿನ ಮಾಲೆಯವನಲ್ಲ. ತನುವ ದಂಡಿಸಿ ಕಂಡೆಹೆನೆಂದಡೆ ಬಂಧನದವನಲ್ಲ. ಏತರಲ್ಲಿಯೂ ತೊಡಕಿಲ್ಲದೆ ಸರ್ವವ ನೇತಿಗಳೆಯದೆ ಅಜಾತನಾಗಿ ನಿಂದವಂಗೆ ಆತನೇತರಲ್ಲಿಯೂ ಸುಖಿಯೆಂದನಂಬಿಗರ ಚೌಡಯ್ಯ.