Index   ವಚನ - 270    Search  
 
ಹಿತ್ತಿಲ ಸೊಪ್ಪಿಂಗೆ ನೀರ ಹೊಯಿದು, ಮತ್ತೆ ಪುನರಪಿಯಾಗಿ ಕೊಯಿವವನಂತೆ, ಭಕ್ತರಿಗೆ ಬೋಧೆಯ ಹೇಳಿ ಚಿತ್ತವೃತ್ತಿಯನರಿದು ಬೇಡುವಂಗೆ ಇನ್ನೆತ್ತಣ ಮುಕ್ತಿಯೆಂದನಂಬಿಗರ ಚೌಡಯ್ಯ.