Index   ವಚನ - 274    Search  
 
ಹೊಡವಡಲೇಕೆ, ಹಿಡಿದು ಪೂಜಿಸಲೇಕೆ, ಎಡೆಯಾಡಲೇಕೆ ದೇಗುಲಕ್ಕಯ್ಯಾ? ಬಡವರಂಧಕರಿಂಗೆ ಒಡಲಿಗನ್ನವನಿಕ್ಕಿದಡೆ, ಹೊಡವಂಟನಾದ ಮೂರು ಲೋಕಕ್ಕೆ[ಯಿದೆ]. ಬಡವರಂಧಕರಿಗೆ ಒಡಲಿಗನ್ನವನಿಕ್ಕದಿದ್ದರೆ, ಹೊಡೆವಡಲಿಕೆ ಹುರುಳಿಲ್ಲವೆಂದನಂಬಿಗರ ಚೌಡಯ್ಯ.