Index   ವಚನ - 15    Search  
 
ವಾರಿಗಿದಿರಾದ ಕಾಷ್ಟ. ಬವರಕ್ಕಿದಿರಾದ ಬಂಟ, ಅರಿದೊರೆಗೆ ಇದಿರಾದ ದೊರೆ ಮರಳುವುದಕ್ಕೆ ನೆರೆ ಸ್ವಪ್ನ. ಕಾಯ ಜೀವಕ್ಕಿದಿರಾದ ಅರಿವು ಭಾವಕ್ಕೆ ಕುರುಹುಗೊಡಲಿಲ್ಲ. ಉಭಯವಳಿದಲ್ಲದೆ ನಿಜಗುಣಯೋಗಿಯ ಯೋಗಕ್ಕೆ ಹೊರಗಲ್ಲ.