ಸರ್ವಮಯ ಆತ್ಮನೆಂದಲ್ಲಿ
ರಕ್ಷಿಸಿ ಶಿಕ್ಷಿಸಿಹೆನೆಂಬುದೇನೊ?
`ಅಣೋರಣೀಯಾನ್ಮಹತೋಮಹೀಯಾನ್' ಎಂಬಲ್ಲಿ
ಬೇರೊಂದರಿತು ಕುರಿತು ಕಾಬುದೇನು?
ಇದಿರಿಗೆ ತಾನಿಲ್ಲ, ತನಗೆ ಇದಿರಿಲ್ಲ ಎಂದಲ್ಲಿ
ಗಜಬಜೆಯಲ್ಲಿ ಕುಜನವೇತಕ್ಕೆ?
ಬೇರಿಗೆ ನೀರನೆರೆದಲ್ಲಿ ಶಾಖೆಗೆ ಸಂದುಂಟೆ?
ಅಂಗ ಪ್ರಾಣಲಿಂಗ ಒಂದೆಂದಲ್ಲಿ
ಅರ್ಪಿತಕ್ಕೆ ಹಿಂದು ಮುಂದಿಲ್ಲ.
ನಿಜಗುಣಯೋಗಿಯ ಯೋಗಕ್ಕೆ ಮುನ್ನವೆ ಇಲ್ಲ.