Index   ವಚನ - 3    Search  
 
ಪಂಚಾಂಗವೆಂಬ ಶಬ್ದಕ್ಕೆ ಅರ್ಥ: ಪಂಚವೆಂದರೆ ಐದು; ಅಂಗವೆಂದರೆ ದೇಹ. ಈ ಉಭಯ ಕೂಡಿದರೆ ದೇಹವಾಯಿತ್ತು. ಈ ದೇಹವೆ ಪಂಚಾಂಗವೆನಿಸಿತ್ತು. ಅದು ಹೇಗೆಂದಡೆ: ನಕಾರ ಮಕಾರ ಶಿಕಾರ ವಕಾರ ಯಕಾರದ ನಿಕ್ಷೇಪವನರಿವುದೇ ಪಂಚಾಂಗ. ಕ್ರಿಯಾ ಜ್ಞಾನ ಇಚ್ಫಾ ಆದಿ ಪರಾ ಚಿಚ್ಫಕ್ತಿಯ ಎಚ್ಚರನರಿವುದೆ ಪಂಚಾಂಗ. ಇಚ್ಫೆಯೊಳಗಿರುವುದೆ ಪಂಚಾಂಗವಯ್ಯ. ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.