Index   ವಚನ - 1    Search  
 
ಪರಿಪೂರ್ಣನಲ್ಲ, ಪ್ರದೇಶಿಕನಲ್ಲ, ನಿರತಿಶಯದೊಳತಿಶಯ ತಾ ಮುನ್ನಲ್ಲ. ಶರಣನಲ್ಲ, ಐಕ್ಯನಲ್ಲ, ಪರಮನಲ್ಲ, ಜೀವನಲ್ಲ, ನಿರವಯನಲ್ಲ, ಸಾವಯನಲ್ಲ. ಪರವಿಹವೆಂಬುಭಯದೊಳಿಲ್ಲದವನು. ನಿರಾಲಯ ನಿಜಗುರು ಶಾಂತೇಶ್ವರನ ಶರಣನ ನಿಲವು ಉಪಮೆಗೆ ತಾನನುಪಮ.