ಸರ್ವಸಂಗ ಪರಿತ್ಯಾಗವ ಮಾಡಿ,
ಅರಣ್ಯದಲ್ಲಿದ್ದರೆ ಮೃಗವೆಂಬರು.
ಊರಿಗೆ ಬಂದರೆ ಸಂಸಾರಿ ಎಂಬರು.
ಭೋಗಿಸಿದರೆ ಕಾಮಿ ಎಂಬರು.
ಹೆಣ್ಣ ಬಿಟ್ಟರೆ ಹೊನ್ನಿಲ್ಲ ಎಂಬರು.
ಹೊನ್ನ ಬಿಟ್ಟರೆ ಮಣ್ಣಿಲ್ಲ ಎಂಬರು.
ಪುಣ್ಯವ ಬಿಟ್ಟರೆ ಪೂರ್ವದ ಕರ್ಮಿ ಎಂಬರು.
ಮಾತನಾಡದಿದ್ದರೆ ಮೂಗನೆಂಬರು.
ಸಹಜವ ನುಡಿದರೆ ಅಂಜುವನೆಂಬರು.
ಇದು ಕಾರಣ ನಿರಾಳಪ್ರಿಯ ಸೊಡ್ಡಳಯ್ಯ
ನಿಮ್ಮ ನನ್ನ ಮಚ್ಚು ಜಗಕ್ಕೊಂದಚ್ಚು.