Index   ವಚನ - 1    Search  
 
ನಡಸು ದೇವಾ ಭಿಕ್ಷಾಯೆಂಬ ಶಬ್ದಕ್ಕೆ. ಅಲ್ಲಿ ಹೋಗಿ ಭಿಕ್ಷಾ ಭಿಕ್ಷಾಯೆಂದಡೆ ಆರೂ ನೀಡದಂತೆ ಮಾಡು. ತಥಾಪಿಸಿ ನೀಡಿದಡೆ, ಆ ನೀಡುವ ಹಂಚು ಎಡಹಿ ಒಡೆವಂತೆ ಮಾಡು, ನಿರ್ಧನಪ್ರಿಯ ರಾಮೇಶ್ವರಾ.