Index   ವಚನ - 47    Search  
 
ಹೊಕ್ಕಲ್ಲಿ ಹೊಕ್ಕು, ಒಕ್ಕುದ ಮಿಕ್ಕುದನುಂಡು ಸುಖಿಯಾಗಿ ಸುಳಿವ ಜಂಗಮಕ್ಕೆ ಕುಲವೆಲ್ಲಿಯದೊ ಛಲವೆಲ್ಲಿಯದೊ? ಶೀಲ ವ್ರತ ನೇಮಂಗಳಿಲ್ಲ, ಜಾತ್ಯಾದಿ ಸೂತಕ ಮುನ್ನಿಲ್ಲ. ಆವಾವಾಚಾರ ವಿಚಾರ ಭಕ್ತಂಗಲ್ಲದೆ ಜಂಗಮಕ್ಕುಂಟೆ? ಒಡೆಯರಲ್ಲಿ ಆಚಾರವಿಲ್ಲೆಂದು ಪಾದೋದಕ ಪ್ರಸಾದವನೊಲ್ಲದಿಪ್ಪ ಬಹುಭ್ರಮಿತ ಪಾತಕರ ಅಚ್ಚಲಿಂಗೈಕ್ಯರು ಮೆಚ್ಚರು ಕಾಣಾ ಚಂದೇಶ್ವರಾ.