Index   ವಚನ - 1    Search  
 
ಇಲ್ಲದ ಕುತ್ತವ ಕೊಂಡು ಬಲ್ಲವರ ಬಾಯ ಹೊಗಹೋದಡೆ ಆ ಬಲ್ಲ ಬಲ್ಲವರೆಲ್ಲ ಆ ಬಲ್ಲೆಯಲ್ಲಿ ಅಲ್ಲತ್ತಗೊಳುತ್ತಿದ್ದರು. ಇದೆಲ್ಲಿಯ ಕುತ್ತವೆಂದು ತಿಳಿದು ವಿಚಾರಿಸಲು ಅದಲ್ಲೇ ಬಯಲಾಯಿತ್ತು, ಗುರುಸಿದ್ಧಮಲ್ಲಾ.