Index   ವಚನ - 4    Search  
 
ಗುರುಪಾದೋದಕ ಪರಮಪಾವನವೆಂದರಿದು ಗುರುಪಾದೋದಕವನೆ ಧರಿಸುವುದು. ಧರಿಸಿದಾತಂಗೆ ಅಷ್ಟಾಷಷ್ಟಿತೀರ್ಥಂಗಳು ತನ್ನೊಳಡಗಿಹವಯ್ಯಾ. ಅದೆಂತೆಂದಡೆ: 'ಅಂಗುಷ್ಠಾಗ್ರೇ ಅಷ್ಟಾಷಷ್ಟಿತೀರ್ಥಂ ನಿತ್ಯಂ ವಸಂತಿ ವೈ' ಎಂದುದಾಗಿ, ಶ್ರೀಗುರುವಿನ ಅಂಗುಷ್ಠಾಗ್ರದಲ್ಲಿ ಸಕಲತೀರ್ಥಂಗಳಿರ್ಪವು. ಶ್ರೀಗುರುವಿನ ಪಾದೋದಕ ಪರಮಪಾವನವೆಂದರಿದು ಗುರುಪಾದೋದಕವನೆ ಧರಿಸುವುದು. ಇದು ಕಾರಣ ಗುರುಪಾದೋದಕದಿಂದವೆ ಪರಮಪದವಪ್ಪುದು, ಅಮರಗುಂಡದ ಮಲ್ಲಿಕಾರ್ಜುನಾ.