ಇಂತೀ ಸ್ಥಲ ಕುಳಂಗಳಲ್ಲಿ ವೇಧಿಸಿ ಭೇದಿಸಿಹೆನೆಂದಡೆ
ನಾಲ್ಕು ವೇದ ಹದಿನಾರು ಶಾಸ್ತ್ರ
ಇಪ್ಪತ್ತೆಂಟು ದಿವ್ಯಪುರಾಣಂಗಳೊಳಗಾದ
ಶಬ್ದಶಾಸ್ತ್ರ, ಸಂಸ್ಕೃತ, ಅಕ್ಷರಜ್ಞತ್ವ, ಭರತ ಶಿಲ್ಪ ಮುಂತಾದ
ಕ್ರಿಯಾಕಾರಕಂಗಳ ತಿಳಿದು ನೋಡಿದರೂ
ಪಂಚಾಕ್ಷರದ ಮೂಲ ಪಂಚಾಕ್ಷರಿಯ ಪ್ರಣಮವನರಿಯಬೇಕು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ.