Index   ವಚನ - 16    Search  
 
ಉರಗನ ಸ್ವಪ್ನದಂತೆ, ಮಯೂರನ ಚಿತ್ತದಂತೆ ಬರುಹಿಯ ಸಂಪದದಂತೆ, ಎರಡಳಿದ ನಿಜನಿಶ್ಚಯದ ಭೇದ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದ ಕೂಟ.