Index   ವಚನ - 17    Search  
 
ಎನ್ನ ಹೃದಯಕಮಲವೆ ಬಸವಣ್ಣನಯ್ಯಾ. ಎನ್ನ ಕಂಠವೆ ಚನ್ನಬಸವಣ್ಣನಯ್ಯಾ. ಎನ್ನ ನಯನದ ದೃಕ್ಕೆ ಸಿದ್ಧರಾಮನಯ್ಯಾ. ಎನ್ನ ಲಲಾಟವೆ ಮಡಿವಾಳಯ್ಯನಯ್ಯಾ. ಎನ್ನ ಶಿರವೆ ಪ್ರಭುದೇವರಯ್ಯಾ. ಇಂತೀ ಐವರ ಶ್ರೀಪಾದವನು ತ್ರಿಕಾಲದಲ್ಲಿ ಅರ್ಚಿಸಿ ಪೂಜಿಸಿ ನಿಶ್ಚಿಂತನಾದೆನಯ್ಯಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.