Index   ವಚನ - 60    Search  
 
ಪ್ರಥಮಾಂಗುಲದಲ್ಲಿ ಉಪದೃಷ್ಟ. ಉಭಯಾಂಗುಲದಲ್ಲಿ ಕರ್ಮಕ್ರೀ. ತ್ರಿವಿಧಾಂಗುಲದಲ್ಲಿ ಸಂಶಯಸಿದ್ಧಿ. ಚತುರ್ವಿಧ ಅಂಗುಲದಲ್ಲಿ ಚತುರ್ವಿಧ ಫಲಪದ. ಪಂಚಮಪಕ್ಷದಲ್ಲಿ ಸಂಚಿತ ಪ್ರಾರಬ್ಧ ಆಗಾಮಿಗಳೆಂಬ ಭವದ ಗೊಂಚಲ ಸಂಚಂಗಳಿಲ್ಲ. ಇದು ಪಂಚಾಕ್ಷರಿಯ ಪ್ರಣಮಮಂತ್ರದ ಕ್ರೀ ಆಚಾರ್ಯನಂಗ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.