ಬೀಜವ ಕಳೆದು ತರು ಬೆಳೆದಂತೆ
ತರುವ ಕಳೆದು ಬೀಜ ಆ ತರುವಿಂಗೆ ಕುರುಹಾದಂತೆ
ಪರಮ ಜೀವನ ಕಳೆದು
ಆ ಜೀವಕ್ಕೆ ತಾ ಪರಮನೆಂಬ ಪರಿಭ್ರಮಣವ ಕಳೆದು ಪರಶಕ್ತಿಸಮೇತವಾದಲ್ಲಿ
ಮರದಲ್ಲಿ ಹುಟ್ಟಿದ ಕಿಚ್ಚು, ಮರ ನಷ್ಟವಾಗಿ ತಾ ನಷ್ಟವಾದಂತೆ
ಅರಿದ ಅರಿವು ಕುರುಹಿನಲ್ಲಿ ಪರಿಹರಿಸಿದ ಮತ್ತೆ
ತೆರೆ ದರುಶನ ಉಭಯವಡಗಿತ್ತು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿದಲ್ಲಿ.