Index   ವಚನ - 64    Search  
 
ಭಕ್ತಿಯೆಂಬುದು ಬೇರು, ವಿರಕ್ತಿಯೆಂಬುದೆ ಮರ, ಫಲವೆಂಬುದೆ ಜ್ಞಾನ. ಪಕ್ವಕ್ಕೆ ಬಂದಿತ್ತೆಂಬಾಗಲೆ ಅವಧಿಜ್ಞಾನ. ತೊಟ್ಟು ಬಿಟ್ಟಲ್ಲಿಯೆ ಪರಮಜ್ಞಾನ. ಸವಿದಲ್ಲಿಯೆ ಅಂತರೀಯಜ್ಞಾನ. ಸುಖ ತನ್ಮಯವಾದಲ್ಲಿಯೆ ದಿವ್ಯಜ್ಞಾನ. ದಿವ್ಯತೇಜಸ್ಸು ಹಿಂಗದಲ್ಲಿಯೆ ಪರಿಪೂರ್ಣಜ್ಞಾನ. ಅದು ಮಹದೊಡಲೆಂಬುದಕ್ಕೆ ಎಡೆಯಿಲ್ಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು