Index   ವಚನ - 76    Search  
 
ಲೋಹದ ಪಿಂಡವೆಂದಡೆ ಅಲಗಾಗದ ಮುನ್ನವೆ ಇರಿಯಬಲ್ಲುದೆ? ಕುಸುಮದ ಗಿಡುವೆಂದಡೆ ಕುಸುಮವಾಸನೆಯ ಕೊಂಡು ಎಸಗುವುದಕ್ಕೆ ಮುನ್ನವೆ, ಆ ಗಿಡುವಿನ ಪರ್ಣನ ಸುವಾಸನೆವುಂಟೆ? ಇಂತೀ ದ್ವೈತ ಅದ್ವೈತದ ಭೇದ ಉಭಯಸ್ಥಲ ವಿವರ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.